Home

High resolution Main page

ಮಾಗಡಿ ಕ್ಷೇತ್ರ ಪರಿಚಯ

ಬೆಂಗಳೂರಿಗೆ ಸು. 50 ಕಿಮಿ  ದೂರದಲ್ಲಿರುವ ಮಾಗಡಿ ಪಟ್ಟಣ 12ನೇ ಶತಮಾನದಲ್ಲೇ ಸ್ಥಾಪಿತವಾಗಿದ್ದು, ಆನಂತರ ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರರ ಆಳ್ವಿಕೆಗೆ ಒಳಪಟ್ಟಿದ್ದರೂ, “ಮಾಗಡಿ ಸಾಮ್ರಾಜ್ಯ” ಮಹಾಪ್ರತಾಪಶಾಲಿ, ಬೆಂಗಳೂರು ನಿರ್ಮಾಪಕ ಇಮ್ಮಡಿ ಕೆಂಪೇಗೌಡನ ಕಾಲದಲ್ಲಿ ಅತ್ಯಂತ ಉನ್ನತ ಸ್ಥಿತಿಯಲ್ಲಿತ್ತೆಂದು ತಿಳಿದುಬರುತ್ತದೆ. ಈತನ ಮಗ ಮುಮ್ಮಡಿ ಕೆಂಪೇಗೌಡ, ಅವನ ಮಗ ದೊಡ್ಡವೀರಪ್ಪಗೌಡ, ಆತನ ಮಗ (ಮುಮ್ಮಡಿ)ಕೆಂಪವೀರಪ್ಪಗೌಡ ಯಲಹಂಕ ವಂಶದ ಕಡೆಯ ದೊರೆ. ಈ ಗೌಡವಂಶದ ಎಲ್ಲಾ ದೊರೆಗಳನ್ನೂ ಕೆಂಪೇಗೌಡರೆಂದೇ ಕರೆಯುವದು ವಾಡಿಕೆಯಾಗಿದೆ.
ಕಂಚಿಯಲ್ಲಿರುವ ಶಿವಕಂಚಿ ವಿಷ್ಣುಕಂಚಿಯೋಪಾದಿಯಲ್ಲಿ ಮಾಗಡಿಯಲ್ಲೂ ವಿಷ್ಣು ದೇವಾಲಯಕ್ಕೆ (ಶ್ರೀ ರಂಗನಾಥಸ್ವಾಮಿ) ಎದುರಾಗಿ ಶೈವ ದೇವಾಲಯವನ್ನು ನಿರ್ಮಿಸಬೇಕೆಂದು, ಶ್ರೀ ಸೋಮೇಶ್ವರ ದೇವಾಲಯವನ್ನು ಕೆಂಪವೀರಪ್ಪಗೌಡನು ಕ್ರಿ.ಶ. 1512ರಲ್ಲಿ ಕಟ್ಟಿಸಿದನೆಂದು ತಿಳಿದುಬರುತ್ತದೆ.

No event found!